Ivanu Geleyanalla Song Lyrics in Kannada - Shreya Goshal
Singer | Shreya Goshal |
Music | Mano Murthy |
Song Writer | Hrudaya Shiva |
ಇವನು ಗೆಳೆಯನಲ್ಲ ಹಾಡಿನ ಸಾಹಿತ್ಯ ಬರೆದವರು ಹೃದಯ ಶಿವ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ರವರು. ಈ ಹಾಡು ೨೦೦೬ ಬಿಡುಗಡೆಯಾದ ಗಣೇಶ್, ಸಂಜನಾ ಗಾಂಧಿ, ಅನಂತ್ ನಾಗ್, ಜೈ ಜಗದೀಶ್, ಪದ್ಮಜಾ ರಾವ್, ಸುಧಾ ಬೆಳವಾಡಿ, ದಿಗಂತ್, ಅಶ್ವತ್, ಸುನೀತಾ ಅವರು ನಟಿಸಿದ ಮುಂಗಾರು ಮಳೆ ಚಿತ್ರದ ಹಾಡಾಗಿದೆ. ಇವನು ಗೆಳೆಯನಲ್ಲ ಹಾಡಿಗೆ ಸಂಗೀತ ಕೊಟ್ಟವರು ಮನೋ ಮೂರ್ತಿ ರವರು. ಮುಂಗಾರು ಮಳೆ ಚಿತ್ರ ನಿರ್ದೇಶಿಸಿದವರು ಯೋಗರಾಜ್ ಭಟ್ ಮತ್ತು ನಿರ್ಮಾಪಕರು ಈ ಕೃಷ್ಣಪ್ಪ.
ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ ತುಂಬಾ ಸನಿಹ ಬಂದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ ಯಾಕೆ ಈ ಥರ
ಜಾಣ ಮನವೇ ಕೇಳು ಜಾರಬೇಡ ಇವನ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ, ಇರಲಿ ಅಂತರ
ಒಲವ ಹಾದಿಯಲ್ಲಿ ಇವನು ನನಗೆ ಹೂವೋ ಮುಳ್ಲೋ
ಮನದ ಕಡಲಿನಲ್ಲಿ ಇವನು ಅಲೆಯೋ ಭೀಕರ ಸುಳಿಯೊ
ಅರಿಯದಂಥ ಹೊಸ ಕಂಪನವೊ ಯಾಕೋ ಕಾಣೆನೊ
ಅರಿತೊ ಮರೆತೊ ಜೀವ ವಾಲದಂತೆ ಇವನ ಕಡೆಗೆ
ಸೋಲದಂತೆ ಕಾಯೇ ಮನವೆ ಉಳಿಸು ನನ್ನನು
ಇವನು ಇನಿಯಲ್ಲ ತುಂಬ ಸನಿಹ ಬಂದಿಹನಲ್ಲ
ತಿಳಿದು ತಿಳಿದು ಇವನು ತನ್ನ ತಾನೇ ಸುಡುತಿಹನಲ್ಲ
ಒಲುಮೆ ಎಂಬ ಸುಳಿಗೆ ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲು ನಗುವುದ ಬಲ್ಲ ಏನೋ ಕಳವಳ
ಮುಳುಗುವವನ ಕೂಗು ಚಾಚುವಂತೆ ಮಾಡಿದೆ ಕೈಯ
ಜಾರಿ ಬಿಡುವುದೇ ಈ ಹೃದಯ ಏನೋ ತಳಮಳ
ಇವನು ಇನಿಯನಲ್ಲ ತುಂಬ ಸನಿಹ ಬಂದಿಹನಲ್ಲ
0 Comments
Please Do Not Post Any Spam Link.