Power Of Youth [Yuvaratna] Song lyrics in Kannada - Nakash Aziz

ಯುವರತ್ನ ಕನ್ನಡ ಚಿತ್ರದ ಪವರ್ ಆಫ್ ಯೂತ್ ಸಾಹಿತ್ಯ. ಪವರ್ ಆಫ್ ಯೂತ್ ಯುವಕರನ್ನು ಪ್ರತಿನಿಧಿಸುವ ಶಕ್ತಿಯುತ ಕನ್ನಡ ಗೀತೆಯಾಗಿದ್ದು, ಅವರ ಗುರಿಗಳನ್ನು ಸಾಧಿಸಲು ಪ್ರೇರಣೆ ನೀಡುತ್ತದೆ.

ಸಂತೋಷ್ ಆನಂದ್ರಾಮ್ ಅವರು ಪವರ್ ಆಫ್ ಯೂತ್ ಸಾಂಗ್ ಸಾಹಿತ್ಯದಲ್ಲಿ ಕೆಲಸ ಮಾಡಿದ್ದಾರೆ ಮತ್ತು ಸಂಗೀತವನ್ನು ತಮನ್ ಎಸ್.

ಈ ಹಾಡನ್ನು ನಕಾಶ್ ಅಜೀಜ್ ಹಾಡಿದ್ದಾರೆ. ಪವರ್ ಆಫ್ ಯೂತ್ ವಿಡಿಯೋ ಹಾಡಿನಲ್ಲಿ ಪುನೀತ್ ರಾಜ್‌ಕುಮಾರ್, ಸಯೇಶಾ ಸೈಗಲ್, ಸೋನು ಗೌಡ, ಧನಂಜಯ್, ಪ್ರಕಾಶ್ ರಾಜ್ ಮತ್ತು ದಿಗಂತ್ ಮಂಚಲೆ ಮುಖ್ಯ ಪಾತ್ರದಲ್ಲಿದ್ದಾರೆ.

ಪವರ್ ಆಫ್ ಯೂತ್ ಕನ್ನಡ ಹಾಡಿನ ಹೊಂಬಾಲೆ ಫಿಲ್ಮ್ಸ್ ರೆಕಾರ್ಡ್ ಲೇಬಲ್ ಹೊಂದಿದೆ.


Power Of Youth [Yuvaratna] Song lyrics in Kannada - Nakash Aziz

Power Of Youth [Yuvaratna] Song lyrics in Kannada - Nakash Aziz
Singer Nakash Aziz
Music Thaman S
Song Writer Santhosh Ananddram

ಯುವ… ಯುವ…
ಯುವ… ಯುವ…

ಜಾಗೊ ಜಾಗೋರೆ ಜಾಗೊ
ನಿನ್ನ ಕನಸು ನೀನಾಗು
ಮುಟ್ಟು ಗುರಿಯನ್ನ ಯುವ

ನುಗ್ಗು ನುಗ್ಗು ನೀ ನುಗ್ಗು
ನಿನ್ನ ಸೈನ್ಯ ನೀನಾಗು
ಬಿಟ್ಟು ಭಯವನ್ನ ಯುವ

ಗೆಲ್ಲಬೇಕು ನೀ ನಿಲ್ಲೋವರೆಗೂ
ನಿಲ್ಲಬೇಕು ನೀ ಗೆಲ್ಲೋವರೆಗೂ
ನಿನ್ನ ಬದುಕಿಗೆ ನೀನೆ ಕನ್ನಡಿ
ನಿನ್ನ ನಂಬಿ ಸಾಗು

ಹೇ
ಹೆಸರು ಮಾಡು ಹಸಿರಾಗೋ ಹಾಗೆ
ಉಸಿರು ಹೋದರು ಹೆಸರಿರೋ ಹಾಗೆ
ಆ ಚರಿತ್ರೆಗೆ ನೀನ್ ಮುನ್ನುಡಿ
ನೂರು ಸಾರಿ ಕೂಗು

ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್

ಯುವ… ಯುವ…

ಚಾಲೆಂಜ್ ಯಾವುದೇ ಬರಲಿ
ಚಾಲೆಂಜ್ ಯಾರದೇ ಇರಲಿ
ಎದುರಿಸು ನೀನು ಎದುರಾಳಿಯನು
ಹಿಂದೆ ತಿರುಗಿ ನೋಡದೆ ಯುವ

ಗೆಲುವು ಯಾರಪ್ಪನದಲ್ಲ
ಯಶಸ್ಸು ಒಬ್ಬನದಲ್ಲ
ಪಟ್ಟರೆ ಶ್ರಮವ ಒಳ್ಳೆಯದಿನವ
ಕಾಣುವೆ ನೀನು ನಡಿ-ನಡಿ ಯುವ

ಹೇ ಯುವ ಯುವ (ಹೇ)
ಹೇ ಯುವ ಯುವ (ಹೇ)

ಕಾಲು ಎಳೆಯೋ
ಜನರ ನಡುವೆ
ಕಾಲರ ಎತ್ತುವ

ಹೇ ಯುವ ಯುವ (ಹೇ)
ಹೇ ಯುವ ಯುವ (ಹೇ)

ಅನುಮಾನ ಪಟ್ಟ
ಜನರ ಫೋನ್ಅಲಿ
ಡಿ.ಪಿ. ಆಗುವ

ಗೆಲ್ಲಬೇಕು ನೀ ನಿಲ್ಲೋವರೆಗೂ
ನಿಲ್ಲಬೇಕು ನೀ ಗೆಲ್ಲೋವರೆಗೂ
ಛಲದಿಂದ ನಿಲ್ಲು ನಗುವಲ್ಲೇ ಕೊಲ್ಲು
ಅವಮಾನ ಮಾಡಿದವರಾ

ಪವರ್ ಆಫ್ ಯೂಥ್
ಪವರ್ ಆಫ್ ಯೂಥ್

ಕಾಮೆಂಟು ಮಾಡೋವ್ರೆಲ್ಲ
ಕೆಲಸಾನ ಮಾಡೋವ್ರಲ್ಲ
ಟೀಕೆಗಳಿಗೆ ಕಿವಿಕೊಡಬೇಡ
ನಿನಗೆ ಅವರು ಹೋಲಿಕೆ ಅಲ್ಲ

ಹೇ ಯುವ ಯುವ (ಹೇ)
ಹೇ ಯುವ ಯುವ (ಹೇ)

ನಾವ್ ಸೋಲಲಿ ಅಂತ
ಕಾಯುತ್ತಿರುವ
ಕಾಯ್ಸುತ್ತ ಇರುವ

ಹೇ ಯುವ ಯುವ (ಹೇ)
ಹೇ ಯುವ ಯುವ (ಹೇ)

ಪರೀಕ್ಷೆಯಲ್ಲಿ
ಫೇಲ್ ಆಗೋರು
ಬದುಕು ಕಟ್ಟುವ

ಹೇ
ಹೆಸರು ಮಾಡು ಹಸಿರಾಗೋ ಹಾಗೆ
ಉಸಿರು ಹೋದರು ಹೆಸರಿರೋ ಹಾಗೆ
ಆ ಚರಿತ್ರೆಗೆ ನೀನ್ ಮುನ್ನುಡಿ
ನೂರು ಸಾರಿ ಕೂಗು

ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್



Post a Comment

0 Comments